Monday, 6 August 2018

Kannadada Kotyadipathi Season 3 - 03 August 2018 - Questions


6. ಹಿಮವದ್ ಗೋಪಾಲಸ್ವಾಮಿ ಬೆಟ್ಟ ಯಾವ ರಾಷ್ಟ್ರೀಯ ಉದ್ಯಾನವನದ ಅತ್ಯುನ್ನತ ಶಿಖರವಾಗಿದೆ? ಬನ್ನೇರುಘಟ್ಟ, ಕುದುರೆಮುಖ, ಭೀಮೇಶ್ವರಿ, ಬ೦ಡೀಪುರ
Which national park's highest peak is Himavad Gopalaswamy Betta? Bannerghatta, Kudremukh, Bhimeshwari, Bandipur

7. ಮಹಾಭಾರತದ ಪ್ರಕಾರ, ಪಾಂಡವರೊಂದಿಗೆ ಬಂದಿದ್ದ ಬೊಗಳುವ ನಾಯಿಯ ಬಾಯಿ ಮುಚ್ಚಿಸಲು, ಏಳು ಬಾಣಗಳನ್ನು ಅದರ ಬಾಯೊಳಗೆ ಬಿಟ್ಟವರು ಯಾರು? ಏಕಲವ್ಯ, ಕರ್ಣ, ಭೀಷ್ಮ, ದೋಣ
In the Mahabharata, who shot seven arrows into the mouth of a barking dog that belonged to the Pandavas to silence it? Ekalavya, Karna, Bhishma, Drona

8. ಇತ್ತೀಚೆಗಷ್ಟೆ ಭಾರತಕ್ಕೆ ’ಮಿಸ್ ವಲ್ಡ್’ ಕಿರೀಟ ತ೦ದುಕೊಟ್ಟ ಮಾಡೆಲ್ ಯಾರು? ಪ್ರಿಯಾಂಕ ಚೋಪ್ರಾ, ಮಾನುಷಿ ಛಿಲ್ಲರ್, ಯುಕ್ತಾ ಮುಖಿ, ಡಯಾನ ಹೇಡನ್
Who was the last Indian model to win the Miss World title? Priyanka Chopra, Manushi Chillar, Yukta Mukhi, Diana Hayden

9. ’ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಹುಲಿಯಾ ಯಾರ ಸಂಗಾತಿ? ಗುತ್ತಿ, ಕಾವೇರಿ, ಚಿನ್ನಮ್ಮ, ಕರಿಮೀನು ಸಾಬಿ
Who has a companion named 'Huliya' in the novel 'Malegalalli Madumagalu'? Gutthi, Kaveri, Chinnamma, Karimeenu Saabi

10. 2018ನೇ ಸಾಲಿನ ಕರ್ನಾಟಕ ಬಜೆಟ್ ನಲ್ಲಿ, ರಾಜ್ಯಕ್ಕೆ ಯಾವ ದೇಶದ ಮಾದರಿಯ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲು 150 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ? ಐರ್ಲೆಂಡ್, ಇರಾನ್, ಇರಾಕ್, ಇಸ್ರೇಲ್
To adopt which country's irrigation system has Rs.150 crores been allocated in the 2018 Karnataka Budget? Ireland, Iran, Iraq, Israel

11. ಇವುಗಳಲ್ಲಿ ಏಪ್ರಿಲ್ 12 1981 ರಂದು ಭೂಮಿಯ ಕಕ್ಷೆಯನ್ನು ಸುತ್ತಿಬಂದ ಮೊದಲ ಬಾಹ್ಯಾಕಾಶ ನೌಕೆ ಯಾವುದು?  ಚ್ಯಾಲೆ೦ಜರ್, ಡಿಸ್ಕವರಿ,  ಎ೦ಟರ್ ಪ್ರೈಸ್, ಕೊಲ೦ಬಿಯಾ
On April 12, 1981, which of these became the first space shuttle to orbit the earth? Challenger, Discovery, Enterprise, Columbia

ಉತ್ತರಗಳು / Answers
6. ಬ೦ಡೀಪುರ / Bandipur
7. ಏಕಲವ್ಯ / Ekalavya
8. ಮಾನುಷಿ ಛಿಲ್ಲರ್ / Manushi Chillar
9. ಗುತ್ತಿ / Gutthi
10. ಇಸ್ರೇಲ್ / Israel 
11. ಕೊಲ೦ಬಿಯಾ / Columbia

ಬೆರಳುಗಳ ಮಿಂಚಿನ ಓಟದ ಪ್ರಶ್ನೆ (ಬೆ.ಮಿ೦.ಪ್ರ):
Fastest Finger First Question (FFF):

ಈ ಪ್ರಾಣಿಗಳನ್ನು ಅವುಗಳ ಸಾಮಾನ್ಯ ಎತ್ತರಕ್ಕೆ ಅನುಗುಣವಾಗಿ ಕಡಿಮೆಯಿಂದ ಹೆಚ್ಚಿನವರೆಗೂ ಜೋಡಿಸಿ - ಒಂಟೆ, ಎಮ್ಮೆ, ಚಿರತೆ, ಬೆಕ್ಕು
Starting from the shortest, arrange these animals according to their average height - Camel, Buffalo, Leopard, Cat

1. ಹಿಂದೂ ಪುರಾಣಗಳಲ್ಲಿ, ತನ್ನ ಒಡೆಯ ಅಥವಾ ಒಡತಿಗೆ ಕೇಳಿದ್ದನ್ನು ಕೊಡುವ ಕಾಮಧೇನು ಯಾವ ಪ್ರಾಣಿ? ಆನೆ, ಹಸು, ಎಮ್ಮೆ, ಕುದುರೆ
In Hindu mythology, what type of animal is Kamadhenu, who provides her owner whatever he or she desires? Elephant, Cow, Buffalo, Horse

2. ಇವುಗಳಲ್ಲಿ ಯಾವುದು ಭೂಗ್ರಹವನ್ನು ಸೂಚಿಸುತ್ತದೆ? ಕೆ೦ಪು ಗ್ರಹ, ಕಂದು ಗ್ರಹ, ನೀಲಿ ಗ್ರಹ, ಹಳದಿ ಗ್ರಹ
Which of these refers to planet Earth? Red Planet, Brown Planet, Blue Planet, Yellow Planet

3. ಮಧ್ಯಾಹ್ನ ಮೂರು ಗಂಟೆ ಸಮಯಕ್ಕೆ ಗಡಿಯಾರದ ಮುಳ್ಳುಗಳು ಯಾವ ಕೋನದಲ್ಲಿ ಇರುತ್ತವೆ? 45 ಡಿಗ್ರಿಗಳು, 90 ಡಿಗ್ರಿಗಳು, 180 ಡಿಗ್ರಿಗಳು, 360 ಡಿಗ್ರಿಗಳು
At what angle will the hands of a clock be at 3:00 p.m? 45 degrees, 90 degrees, 180 degrees, 360 degrees

4. ಇವುಗಳಲ್ಲಿ ಸ್ವಚ್ಛ್ ಭಾರತ್ ಅಭಿಯಾನದ ಲಾ೦ಛನ ಯಾವುದು? ಪೊರಕೆ, ನೀರು, ಗಾಂಧೀಜಿಯ ಕೋಲು, ಗಾಂಧೀಜಿಯ ಕನ್ನಡಕ
What is the logo of the Swachh Bharath Abhiyan? Broomstick, Water, Gandhiji's stick, Gandhiji's spectacles

5. ಇಲ್ಲಿರುವ ನಟರ ಹೆಸರುಗಳಲ್ಲಿ ಯಾವ ಜೋಡಿ ಅಣ್ಣ ತಮ್ಮಂದಿರದ್ದಲ್ಲ? ಗಣೇಶ್ - ಮಹೇಶ್, ವಿಜಯ್ ರಾಘವೇಂದ್ರ - ಶ್ರೀಮುರಳಿ, ಚಿರಂಜೀವಿ ಸರ್ಜಾ - ಧ್ರುವ ಸರ್ಜಾ, ಪ್ರಜ್ವಲ್ ದೇವರಾಜ್ - ದಿಗಂತ್
Which of the following pairs of actors is not of brothers? Ganesh - Mahesh, Vijay Raghavendra - Sriimurali, Chiranjeevi Sarja - Dhruva Sarja, Prajwal Devaraj - Diganth

6. ಒಂಟೆಯ ಬೆನ್ನಿನ ಡುಬ್ಬದಲ್ಲಿ ಏನು ಸಂಗ್ರಹವಾಗಿರುತ್ತದೆ? ನೀರು, ಕೊಬ್ಬು, ಪ್ರೋಟೀನ್, ಹಾಲು
What does a camel's hump contain? Water, Fat, Protein, Milk

ಉತ್ತರಗಳು / Answers
ಬೆ.ಮಿ೦.ಪ್ರ / FFF - ಬೆಕ್ಕು, ಚಿರತೆ, ಎಮ್ಮೆ, ಒಂಟೆ / Cat, Leopard, Buffalo, Camel
1. ಹಸು / Cow
2. ನೀಲಿ ಗ್ರಹ / Blue Planet
3. 90 ಡಿಗ್ರಿಗಳು / 90 degrees
4. ಗಾಂಧೀಜಿಯ ಕನ್ನಡಕ / Gandhiji's spectacles
5. ಪ್ರಜ್ವಲ್ ದೇವರಾಜ್ - ದಿಗಂತ್ / Prajwal Devaraj - Diganth
6. ಕೊಬ್ಬು / Fat

No comments:

Post a Comment